ಚುನಾವಣಾ ಆಯೋಗ (Election Commission of India)
ಭಾರತೀಯ ರಾಜಕೀಯ | UPSC • State PSC • ಸ್ಪರ್ಧಾತ್ಮಕ ಪರೀಕ್ಷೆಗಳು
1. ಪರಿಚಯ
ಭಾರತದ ಚುನಾವಣಾ ಆಯೋಗವು ಸ್ವತಂತ್ರ ಸಂವಿಧಾನಿಕ ಸಂಸ್ಥೆಯಾಗಿದ್ದು, ದೇಶದಲ್ಲಿ ಸ್ವಚ್ಛ ಮತ್ತು ನಿಷ್ಪಕ್ಷಪಾತ ಚುನಾವಣೆಯನ್ನು ನಡೆಸುವ ಜವಾಬ್ದಾರಿ ಹೊಂದಿದೆ. ಇದು ಪ್ರಜಾಪ್ರಭುತ್ವದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ.
2. ಸಂವಿಧಾನಿಕ ಆಧಾರ
- ಭಾರತೀಯ ಸಂವಿಧಾನದ ವಿಧಿ 324 ಅಡಿಯಲ್ಲಿ ಸ್ಥಾಪನೆ
- ಚುನಾವಣೆಯ ಸಂಪೂರ್ಣ ಮೇಲ್ವಿಚಾರಣೆ ಮತ್ತು ನಿಯಂತ್ರಣ
- ಸ್ವತಂತ್ರ ಕಾರ್ಯಪದ್ಧತಿ
3. ರಚನೆ (Structure)
- ಮುಖ್ಯ ಚುನಾವಣಾ ಆಯುಕ್ತ (Chief Election Commissioner - CEC)
- ಇತರೆ ಚುನಾವಣಾ ಆಯುಕ್ತರು
- ರಾಷ್ಟ್ರಪತಿ ನೇಮಕ ಮಾಡುತ್ತಾರೆ
4. ಮುಖ್ಯ ಕಾರ್ಯಗಳು
- ಚುನಾವಣಾ ವೇಳಾಪಟ್ಟಿ ಪ್ರಕಟಣೆ
- ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು
- ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಸುವುದು
- ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆ
- ಮಾದರಿ ನೀತಿ ಸಂಹಿತೆ (Model Code of Conduct - MCC) ಜಾರಿಗೆ ತರುವುದು
5. ಮಹತ್ವ
- ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ
- ನಿಷ್ಪಕ್ಷಪಾತ ಮತ್ತು ಸ್ವಚ್ಛ ಚುನಾವಣೆ
- ಜನರ ವಿಶ್ವಾಸವನ್ನು ಉಳಿಸುತ್ತದೆ
6. ಸವಾಲುಗಳು
- ಪಣಬಲ ಮತ್ತು ಪ್ರಭಾವದ ರಾಜಕೀಯ
- ನಕಲಿ ಮಾಹಿತಿ (Fake News)
- ನೇಮಕಾತಿ ಪ್ರಕ್ರಿಯೆಯ ಬಗ್ಗೆ ಚರ್ಚೆಗಳು
7. ಪರೀಕ್ಷಾ ದೃಷ್ಟಿಕೋನ
- Prelims → ವಿಧಿ 324, MCC
- Mains → ಸ್ವಾಯತ್ತತೆ, ಸವಾಲುಗಳು, ಸುಧಾರಣೆಗಳು
Shaktimatha Learning
Health • Mind • Skills • Career • Life Education
No comments:
Post a Comment